ವಾಗ್ದೇವಿ – ೨೩

ವಾಗ್ದೇವಿ – ೨೩

ವೇದವ್ಯಾಸ ಉಪಾಧ್ಯನ ಮನವಿಯನ್ನು ಇತ್ಯರ್ಥಿಸಲಿಕ್ಕೆ ನೇಮಿಸೋ ಣಾದ ದಿವಸವು ಬಂದಿತು. ಚಂಚಲನೇತ್ರರ ಕಡೆಯಿಂದ ಪಾರುಪತ್ಯಗಾರ ವೆಂಕಟಪತಿ ಆಚಾರ್ಯನು ಸಕಾಲದಲ್ಲಿ ಬಂದು ಸಭೆಯ ಮುಂದೆ ಕೂತು ಕೊಂಡನು. ಬಾಲಮುಕುಂದಾಚಾರ್ಯನು ಅಗ್ರಸ್ಥಾನದಲ್ಲಿ ಕುಳಿತನು. ವೇದವ್ಯಾಸ ಉಪಾಧ್ಯನು ಬಂದ ಬಳಿಕ ಅವನನ್ನು ಕುರಿತು-“ನಿನ್ನ ಮನವಿ ಯಲ್ಲಿ ನಿವರಿಸಲ್ಪಟ್ಟ ವಿಷಯಗಳನ್ನು ಸಿದ್ಧಾಂತವಡಿಸುವುದಕ್ಕೋಸ್ಕರ ಸಾಕ್ಷ ವೇನಿದೆ?” ಎಂದು ಬಾಲಮುಕುಂದನು ಪ್ರಶ್ನೆಮಾಡಿದನು. “ನನ್ನ ಹೇಳಿಕೆ ಗಳೆಲ್ಲ ವಾಸ್ತವ್ಯವೆಂಬುದಕ್ಕೆ ಚಂಚಲನೇತ್ರರನ್ನೂ ವಾಗ್ದೇವಿಯನ್ನ್ಹೂ ಕರೆಸಿ ವಿಚಾರಣೆ ಮಾಡಿದರೆ ಸಾಕು. ಅವರ ಒಪ್ಪಿಗೆಗಳಿಂದಲೇ ಆನೇಕ ಪ್ರಮೇಯ ಗಳು ವ್ಯಕ್ತವಾಗುವುವು” ಎಂದು ಉತ್ತರಕೊಟ್ಟನು. ಬಾಲಮುಕುಂದಾಚಾ ರ್ಯನು ಖೋ ಎಂದು ನಕ್ಕನು. ಅಂತೆಯೇ ಎಲ್ಲರೂ ನಗಲಿಕ್ಕೆ ತೊಡಗಿದರು: ವೇದವ್ಯಾಸ ಉಪಾಧ್ಯಗೆ ಸಿಟ್ಟು ಬಂತು. ಕುತ್ಸಿತ ಮಾತುಗಳನ್ನು ಆಡುವುದ ಕೈಸಗಿದನು. ಈ ದೆಸೆಯಿಂದ ಸಭಾನಾಯಕಗೂ ಸಭಾಜನರಿಗೂ ವಿಪರೀತ ಸಿಟ್ಟು ಬಂದು, ಈ ಮೂರ್ವಗೆ ಬಹಿಷ್ಕಾರ ಪತ್ರ ಕೊಡುವುದೇ ಲೇಸೆಂದು ತೋರಿತು. ಇದೇ ತನ್ನ ವೈನ ನಡೆಯಲಿಕ್ಕೆ ಸರಿಯಾದ ಸಮಯವೆಂದು ಭೀಮಾಚಾರ್ಯನು ಮುಕುಳಿತ ಹಸ್ತನಾಗಿ ಸಭೆಯವರ ಸಮ್ಮುಖದಲ್ಲಿ ನಿಂತು, ಸಣ್ಣದೊಂದು ಭಾಷಣವನ್ನು ಮಾಡಿದನು.

“ವಸಂತನಗರದ ಮಠಾಧಿಪತಿಗಳ ಆಜ್ಞೆಯನ್ನನುಸರಿಸಿ, ಅವರ ಪ್ರತಿ ನಿಧಿಗಳು ಸಭೆ ಮಾಡಿ, ಚಂಚಲನೇತ್ರಸನ್ಯಾಸಿಗಳ ಶೀಲವನ್ನು ಕುರಿತು ಪರಿಶೋಧನೆ ಮಾಡುವದಕ್ಕಾಗಿ ಅಗತ್ಯವಾದ ಸಾಕ್ಷಿಯನ್ನು ಕೊಡೆಂದು ವಾದಿಯ ಕೂಡೆ ಕೇಳಿದಾಗ ನ್ಯಾಯವಾದ ಪ್ರತಿವಾಕ್ಯಕೊಡದೆ ಹುಡುಗಾಟಕೆಯ ಮಾತುಗಳನ್ನು ಆಡುವ ಮೂರ್ಖನನ್ನು ಸಭಾ ಜನರು ಈಗಲೇ ಶಿಕ್ಷಿ ಸುವುದು ಅನ್ಯಾಯವೆನ್ನಕೂಡದು. ಪರಂತು ಅವನು ಏನೂ ತಿಳಿಯದ ಮೂಢನೆಂಬ ಹಾಗೆ ಅವನ ಮಾತುಗಳ ಸ್ವಭಾವದಿಂದಲೇ ತಿಳಿಯಲಿಕ್ಕೆ ಅನುಕೂಲವಿರುವುದು ನಾನು ಹೆಚ್ಚೇನು ಅರಿಕೆ ಮಾಡಲಿ? ಮುಖ್ಯ ಅವನ ಸಹಸ್ರ ಅಪರಾಧಗಳಿದ್ದರೂ ಅವನ ಬುದ್ದಿವೈಕಲ್ಯವನ್ನು ಆಲೋಚನೆಗೆ ತಕ್ಕೊಂಡು ಅವನ ಅಪರಾಧಗಳನ್ನೆಲ್ಲಾ ಕ್ಷಮಿಸಬೇಕೆಂದು ವಿನಯದಿಂದ ನಾನು ಸಭಾಪತಿಗಳನ್ನೂ ಸಭಾಜನರನ್ನೂ ಬೇಡಿಕೊಳ್ಳುತ್ತೇನೆ. ಭೂಲೋಕ ದಲ್ಲಿ ಅನೇಕ ಮಠಾಧಿಪತಿಗಳು ಪೂರ್ವಾಶ್ರಮದ ನೆಂಟರಿಷ್ಟರಿಗೆ ಸಹಾಯ ಮಾಡುವ ಇಚ್ಚೆಯಿಂದ ದ್ರವ್ಯವನ್ನಾಗಲೀ ಉಳಕೊಳ್ಳಲಿಕ್ಕೆ ಬಿಡಾರವನ್ನೂ ಕೊಡುವ ವಾಡಿಕೆಯು ಅನಾದಿಯಿಂದ ನಡೆದು ಬಗುತ್ತದೆ. ವಾಗ್ದೇವಿಯನ್ನು ಅವಳ ಗಂಡನ ಮತ್ತು ತಂದೆ ತಾಯಿಗಳ ಸಮೇತ ಮರದಲ್ಲಿ ಉಳಕೊಳ್ಳು ವದಕ್ಕೆ ಜಾಗಕೊಟ್ಟ ಮಾತ್ರದಿಂದ ಯತಿಗಳ ಪರಿಶುದ್ಧತೆಗೆ ಕುಂದುಬರಲಿಕ್ಕೆ ಕಾರಣವಿಲ್ಲವು. ಇದನ್ನೆಲ್ಲಾ ಆಲೋಚಿಸದೆ, ದೀಪದ ಮೇಲೆ ಬಿದ್ದ ಪತಂಗ ದಂತೆ ಬಡಿದಾಡಿಕೊಳ್ಳುವ ವೇದವ್ಯಾಸನ ಹುಚ್ಚಾಟಕ್ಕೆ ಯಾರಿಗೆ ಸಿಟ್ಟು ಬಾರದು? ಅವನು ಮನವಿಯಲ್ಲಿ ಹೇಳುವ ದೂರುಗಳನ್ನು ಸ್ಥಾಸಿಸುವುದಕ್ಕೆ ಸಾಕ್ಷಿಯನ್ನು ತರುವುದೇ ಅಸಾಧ್ಯ. ಒಬ್ಬನ ಮೇಲೆ ಅವರವರು ಮಾಡಿದ ಪಾಪಕ್ಕೆ ಅವರವರೇ ಹೊಣೆಯಾಗಿರುವರು. ‘ಮಾಡಿದವನ ಪಾಪ ಆಡಿ ದವನ ತಲೆ ಮೇಲೆ’ ಎಂಬ ಗಾದೆಯಂತೆ ವೇದವ್ಯಾಸನ ಗತಿಯಾಗುವದಾ ಯಿತು. ಇದು ಅವನ ಗ್ರಹಗತಿಯೇ ಸರಿ. ಈಗ ಅವನು ಮಾಡಿದ ಅಪ್ರ ಬದ್ಧತೆಯನ್ನು ಸಭೆಯವರು ಸಂಪೂರ್ಣವಾಗಿ ಕ್ಷಮಿಸಿಬಿಟ್ಟು, ಇಷ್ಟು ದಿವಸ ಈ ಪುರದಲ್ಲಿ ಉಳುಕೊಂಡು, ಪಡಕೊಂಡ ಸಮಾಚಾರದ ಮೇಲೆ ತಮ್ಮ ಚಿತ್ತಕ್ಕೆ ಯುಕ್ತತೋರುವಂತೆ ಒಂದು ಬಿನ್ನವತ್ತಳೆಯನ್ನು ಶ್ರೀಪಾದಂಗಳವ ರಿಗೆಲ್ಲರಿಗೂ ಬರೆದುಕೊಳ್ಳ ಬೇಕಾಗಿ ನಾನು ಬಡ ವೇದವ್ಯಾಸನ ಕಡೆಯಿಂದ ಮಾಡುವ ಈ ಕಡೇ ಅರಿಕೆಯನ್ನು ನಡಿಸಿಕೊಡಬೇಕೆಂದು ಕಡ್ಡಿ ಮುರಿದು ಹೇಳಿಕೋತೇನೆ.?”

ಹೀಗೆ ಮಾತಾಡಿದ ತರುವಾಯ ಭೀಮಾಚಾರ್ಯನು ವೇದವ್ಯಾಸ ನಿಗೆ ಹಸ್ತ ಸಂಕೇತದಿಂದ ತಿಳಿಸಿದ ಬುದ್ಧಿಮಾರ್ಗವನ್ನನುಸರಿಸಿ, ಅವನು ತನ್ನ ಅಪರಾಧಗಳನ್ನು ಕ್ಷಮಿಸಬೇಕೆಂದು ಸಭೆಯ ಮುಂದೆ ಅಡ್ಡ ಬಿದ್ದು ಹೇಳಿಕೊಂಡನು. ಆಗ ಬಾಲಮುಕುಂದಾಚಾರ್ಯನು ಹೇಳಿದ್ದೇನೆಂದರೆ:

“ವೇದವ್ಯಾಸ ಉಪಾಧ್ಯನ ಕುಯುಕ್ತಿಗಳು ಸಾಮಾನ್ಯವಾದುವುಗಳಲ್ಲ. ತಾರ್ಕಣೆ ಮಾಡಕೂಡದ ಅಸಹ್ಯಕರವಾದ ದೋಷಾರೋಹಣೆಯನ್ನು ಒಬ್ಬ ಯತಿಯ ಮೇಲೆ ಮಾಡಿಬಿಟ್ಟು, ರಾಜದ್ವಾರದ ವರೆಗೂ ಮಠಾಧಿಪತಿಗಳನ್ನು ದೂರಿ, ನಮ್ಮನ್ನೆಲ್ಲಾ ವ್ಯರ್ಥವಾಗಿ ದಣಿಸಿದ್ದಕ್ಕಾಗಿ ನಾವು ಶಾನೆ ಪಶ್ಚಾತ್ತಾಪ ಪಡುವದಾಯಿತು. ತನ್ನಿಂದಾಗದ ಕಾರ್ಯದಲ್ಲಿ ಪ್ರವರ್ಶಿಸಿದ ಈ ಬಣಗು ಮನುಷ್ಯನ ಮೇಲೆ ಮಠಾಧಿಸತಿಗಳು ವೈಮನಸ್ಸು ತಾಳುವುದು ಏನು ಆಶ್ಚರ್ಯ? ಗಂಡನಾಜ್ಞೆಯೊಳಗಿರುವ ಹೆಂಡತಿಯೊಬ್ಬಳು ತಂದೆತಾಯಿಗಳ ಸಮೇತ ಪೂರ್ವಾಶ್ರಮದಲ್ಲಿ ಸಂಬಂಧವಿರುವ ಯತಿಯ ಮಠದಲ್ಲಿ ವಾಸ ಮಾಡಿಕೊಂಡಿದ್ದರೆ ಅವಳ ಪಾತಿವ್ರತ್ಯಕ್ಕೆ ಲಾಂಛನ ತಗಲದು. ಅವಳು ದುಶ್ಶೀಲಳಾದರೆ ಗಂಡನು ಸುಮ್ಮಗಿರನು; ಯತಿಯು ನಿರ್ದೋಷಿಯಲ್ಲದಿದ್ದರೆ ಶಿಷ್ಯಮಂಡಲಿಯು ಮೌನಧಾರಣೆ ಮಾಡಿಕೊಂಡಿರುವುದೇ? ವೇದವ್ಯಾಸ ಉಪಾಧ್ಯನೊಬ್ಬನೇ ಆ ಬಡ ಸ್ತ್ರೀಯನ್ನೂ ಪವಿತ್ರರಾದ ಚಂಚಲನೇತ್ರ ಶ್ರೀಪಾದಂಗಳವರನ್ನೂ ದಣಿಸಬೇಕೆಂಬ ಆತುರದಿಂದ ಒದ್ದಾಡುವುದು ಒಂದು ಲೋಕೋಪಕಾರ ಕೃತ್ಯವನ್ನು ಮಾಡುವದಕ್ಕಲ್ಲ. ದ್ವೇಷವನ್ನು ಪೂರೈಸಿಕೊಳ್ಳುವದಕ್ಕಾಗಿರಬೇಕು. ಅವನು ಹೇಳುವ ದೂರು ವಿಹಿತವಾದರೆ ಒಬ್ಬನಾದರೂ ಸಾಕ್ಷಿ ಕೊಡಲಿಕ್ಕೆ ಮುಂದೆ ಬಾರದಿರನು. ಆದಕಾರಣ ಚಂಚಲನೇತ್ರರಾಗಲೀ ವಾಗ್ದೇವಿಯಾಗಲೀ ಕಲ್ಮಷರಹಿತರೆಂದೇ ಸಭೆಯ ವರೂ ಅಭಿಪ್ರಾಯ ಪಡಬೇಕಾಗಿರುತ್ತದೆ. ಸಭಾಸದರಲ್ಲಿ ಯಾರಾದರೂ ಇದಕ್ಕೆ ವಿರೋಧವಾದ ಭಾವನೆಯುಳ್ಳವರಾದರೆ ಈಗಲೇ ತಿಳಿದರೆ ಉತ್ತಮ ವಿತ್ತು. ನಾನು ಹೆಚ್ಚಿಗೆ ಹೇಳತಕ್ಕದ್ದಿಲ್ಲ.”

ಬಾಲಮುಕುಂದಾಚಾರ್ಯನು ಪಡುವ ಅಭಿಪ್ರಾಯಕ್ಕೆ ತಾವು ಸರ್ವರೂ ಒಡಂಬಡುತ್ತೇವೆಂದು ಉಳಿದ ನಾಲ್ಕು ಆಚಾರ್ಯರೂ ಹೇಳಿದರು ತಮ್ಮ ಐಕಮತ್ಯವಾದ ಇತ್ಯರ್ಥವನ್ನು ಮಠಾಧಿಪತಿಗಳ ಪರಾಂಬರಿಕೆಗೆ ತರುವುದು ಮಾತ್ರ ಉಳಿದಿದೆ. ಸಭೆಯ ಕೆಲಸವೆಲ್ಲಾ ಮುಗಿಯಿತೆಂದು ಸಭಾಪತಿಯು ತಿಳಿಸಿದನು. ಮನಸ್ಸಿದ್ದರೆ ವೇದವ್ಯಾಸಉಪಾಧ್ಯನು ಮಠಾಧಿ ಪತಿಗಳ ಸಭೆಯ ಮುಂದೆ ಬರಬಹುದಾಗಿ ಅವನಿಗೂ ತಿಳೆಸೋಣಾಯಿತು. ಅವನು ಕೃಷ್ಣನದನನಾಗಿ ಹೊರವಂಟನು.

ಭೀಮಾಚಾರ್ಯನೂ ವೆಂಕಟಪತಿ ಆಚಾರ್ಯನೂ ಒಟ್ಟಿನಲ್ಲಿ ಚಂಚಲನೇತ್ರರ ಮಠಕ್ಕೆ ಹೋದರು. ಸಭೆಯ ತೀರ್ಮಾನವನ್ನು ವೆಂಕಟ ಪತಿ ಆಚಾರ್ಯದಿಂದ ತಿಳಿದು ಚಂಚಲನೇತ್ರರು ಸಂತೋಷಪಟ್ಟರು. ಭೀಮಾಚಾರ್ಯನು ಊರಿಗೆ ಹೋಗಲಿಕ್ಕೆ ಅಪ್ಪಣೆಯನ್ನು ಅಪೇಕ್ಷಿಸಿದನು. ಶ್ರೀಪಾದಂಗಳವರು ಅವರಿಗೆ ನೂರು ರೂವಾಯಿ ಸಂಯುಕ್ತವಾದ ಫಲ ಮಂತ್ರಾಕ್ಷತೆಯನ್ನು ಕೊಟ್ಟು, ಮಠದ ಮೇಲೆ ಅಭಿಮಾನವಿಟ್ಟು ನಡೆದು ಕೊಳ್ಳಬೇಕಾಗಿ ಅಪ್ಪಣೆ ಕೊಟ್ಟರು. ಕಿಂಕರನು ಆಜ್ಞಾಧಾರಕನೇ?” ಎಂದು ಅಡ್ಡಬಿದ್ದು ಭೀಮಾಚಾರ್ಯನು ಮಠದಿಂದ ಹೊರಟು ವಾಗ್ದೇವಿಯನ್ನು ಕಂಡನು. ಸಭೆಯಲ್ಲಿ ಆದ ಇತ್ಯರ್ಥದ ಸಮಾಚಾರವೆಲ್ಲಾ ಅವಳಿಗೆ ಮೊದಲೆ ತಿಳಿದಿತ್ತು. ಅವಳು ಆಚಾರ್ಯನ ಕಾಲಿಗೆ ಬಿದ್ದು, -‌ತಮ್ಮ ಅನುಗ್ರಹ ದಿಂದ ಮರ್ಯಾದೆ ಉಳಿದರೂ ಇನ್ನು ಮುಂದೆ ಈ ಶತ್ರುಗಳ ಬಾಧೆಯು ತಪ್ಪಲಾರದಾದ್ದರಿಂದ ನನ್ನನ್ನು ಬಿಟ್ಟುಹಾಕಬಾರದು?” ಎಂದು ಬೇಡಿ ಕೊಂಡಲ್ಲಿ ಭೀಮಾಚಾರ್ಯನು ಅವಳಿಗೆ ಖಂಡಿತವಾದ ಅಭಯಕೊಟ್ಟು. ಅವಳಿಂದ ಸತ್ಕರಿಸಲ್ಪಟ್ಟವನಾಗಿ ಇನ್ನು ಕೆಲವು ತಿಂಗಳಲ್ಲಿ ಬರುವೆನೆಂದು ವಾಗ್ದತ್ತಮಾಡಿ ಹೊರಟನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾಖಲೆ
Next post ಬೆರಳ ಕೇಳಿದರೆ ಕೈಯ ಕೊಡುವವನು

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys